Saarathi Vachana

Open in Saarathi Get the app

ತನುವಿನಲ್ಲಿ ಜ್ಞಾನಗುರು ಸಾಹಿತ್ಯವಾಗಿ ತನುಭಾವವಿಲ್ಲ ನೋಡಾ. ಮನದಲ್ಲಿ ಅರುಹೆಂಬ ಶಿವಲಿಂಗ ಅಚ್ಚೊತ್ತಿತ್ತಾಗಿ ಮನಭಾವವಿಲ್ಲ ನೋಡಾ. ಭಾವದಲ್ಲಿ ಮಹಾನುಭಾವವೆಂಬ ಜಂಗಮ ಸಂಬಂಧವಾಯಿತ್ತಾಗಿ ಭಾವಾಭಾವಂಗಳಿಲ್ಲದ ಸದ್ಭಾವಿ ನೋಡಾ.

Tomtada Siddhalimga Shivayogigalu

Open in Saarathi Get the app

Get the app